ದಿಲೀಪ್ ರಾಜ್ (ಜನನ 2 ಸೆಪ್ಟೆಂಬರ್ 1978) ಒಬ್ಬ ಭಾರತೀಯ ನಟ , ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕ ಮತ್ತು ನಿರ್ಮಾಪಕನಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು 24 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೂರದರ್ಶನದಲ್ಲಿ ಪೋಷಕ ನಟನಾಗಿ ಯಶಸ್ವಿ ವೃತ್ತಿಜೀವನದ ನಂತರ , ಅವರು 2005ರಲ್ಲಿ ಬಿಡುಗಡೆಯಾದ ಬಾಯ್ ಫ್ರೆಂಡ್ ಚಿತ್ರದಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಜನಪ್ರಿಯತೆ ಗಳಿಸಿದ್ದು 2007ರಲ್ಲಿ ಬಿಡುಗಡೆಯಾದ ' ಮಿಲನ ' ಚಿತ್ರದ ಮೂಲಕ , ಇದರಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. 2016ರಲ್ಲಿ ಬಿಡುಗಡೆಯಾದ ಯು ಟರ್ನ್ ಎಂಬ ಚಿತ್ರದಲ್ಲಿ ಅವರು ನಾಟಕೀಯ ರೋಮಾಂಚಕ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಟ್ರೆಡ್ಮಿಲ್ ನಾಟಕದಲ್ಲಿ ಪ್ರಮುಖ ಪಾತ್ರ ಸೇರಿದಂತೆ ರಂಗಭೂಮಿಯ ಪಾತ್ರಗಳಲ್ಲಿಯೂ ಅವರು ನಟಿಸಿದ್ದಾರೆ. == ವೈಯಕ್ತಿಕ ಜೀವನ == ದಿಲೀಪ್ ರಾಜ್ ಹುಟ್ಟಿದ್ದು ಬೆಂಗಳೂರಿನ ಕರ್ನಾಟಕದಲ್ಲಿ. ಇವರು ಶ್ರೀವಿದ್ಯಾ ಎಂಬವರನ್ನು ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. == ವೃತ್ತಿಜೀವನ == ಇವರು ಜನಪ್ರಿಯ ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಬಾಗ್ಯ, ಮಾಂಗಲ್ಯ, ಮಾಳೆಬಿಲ್ಲು, ಪ್ರೀತಿಗಾಗಿ ಮತ್ತು ಸತ್ಯ ಘಟನೆಯನ್ನು ಆಧರಿಸಿದ ರಥಸಪ್ತಮಿ. ಇವರು ಡಬ್ಬಿಂಗ್ ಕಲಾವಿದರೂ ಆಗಿದ್ದಾರೆ. ಆ ದಿನಗಳು (ಚೇತನ್ ಅವರ ಪಾತ್ರಕ್ಕಾಗಿ) ಡಬ್ ಮಾಡಿದ್ದಾರೆ ಮತ್ತು ಇನ್ನೂ ಅನೇಕ ಕನ್ನಡ ಚಿತ್ರಗಳಿಗೆ ಡಬ್ ಮಾಡಿದ್ದಾರೆ. == ಚಲನಚಿತ್ರಗಳ ಪಟ್ಟಿ == ಎಲ್ಲಾ ಚಲನಚಿತ್ರಗಳು ಕನ್ನಡದಲ್ಲಿವೆ, ಬೇರೆ ಭಾಷೆಯಲ್ಲಿ ಇದ್ದರೆ ಉಲ್ಲೇಖಿಸಲಾಗುತ್ತದೆ. ಕಂಠದಾನ ಕಲಾವಿದನಾಗಿ ಅಂತು ಇಂತೂ ಪ್ರೀತಿ ಬಂತು (2008) ಆದಿತ್ಯ ಬಾಬುಗಾಗಿ == ದೂರದರ್ಶನ == == ನಿರ್ಮಾಪಕನಾಗಿ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ರಾಜ್